Thursday, 13 April 2017

ಏನಿದು ಗುಡ್ ಫ್ರೈಡೆ...?

'ಮರಣ' ಘೋರವಾದ್ದದ್ದು.
ಹೆದರುವಂತದ್ದು
ದು:ಖತರುವಂತದ್ದು
ನೋವಿನ ಸಂಗತಿ
ಸಾವು ಎಂದಾಕ್ಷಣ ಎಂತಹ ಮಹಾ ವ್ಯಕ್ತಿಯೂ ಸ್ತಭ್ದವಾಗುವ ಸಂಗತಿಯದು.

ಆಕಾಶವೇ ಕಳಚಿ ಬಿದ್ದಂತಹ ಅನುಭವ,
ಹೃದಯ ಬಡಿತವೇ ಸ್ತಬ್ಧವಾಗುವ ಅನುಭವ,
ದಿಕ್ಕು ತೋಚದ ಕ್ಷಣಗಳು...

ಸಾವು ಎಂದರೆ ಭಯ. ಸಾವು ಎಂಬ ಪದವೇ ಮನುಷ್ಯನನ್ನು ಭಯಪಡಿಸುತ್ತದೆ.

ಆದರೆ.......................

ಇಡೀ ನವ ಇತಿಹಾಸದಲ್ಲೇ, ವರ್ತಮಾನದಲ್ಲಿ, ಭವಿಷ್ಯದಲ್ಲಿ ಒಬ್ಬ ವ್ಯಕ್ತಿಯ ಮರಣವನ್ನು ಮಾತ್ರ ಇಡೀ ಪ್ರಪಂಚ ಶುಭವೆಂದು ಕರೆಯಿತು.

ಅದುವೇ ಯೇಸು ಕ್ರಿಸ್ತನ ಮರಣ.....

ಆ ದಿನವನ್ನು ಶುಭ ಶುಕ್ರವಾರವೆಂದು ಆಚರಿಸಲಾಯಿತು.

ಯಾಕೆ ಈ ಯೇಸುಕ್ರಿಸ್ತನ ಮಾರಣವನ್ನು ಈ ಲೋಕ ಶುಭವೆಂದು ಕರೆಯುತ್ತದೆ.?

ಏನಿರಬಹುದು?  ಯಾಕಿರಬಹುದು?  ಏನಿದರ ರಹಸ್ಯ?

ಅದನ್ನು ತಿಳಿಯಬೇಕಾದರೆ, ನಾವು ಆ ಸಂಭವದ ಹಿನ್ನೆಲೆಯನ್ನೂ, ಇತಿಹಾಸವನ್ನೂ, ಆ ಯೇಸುಕ್ರಿಸ್ತನನ್ನು ಅರಿತುಕೊಳ್ಳಲೇ ಬೇಕು.
ಐತಿಹಾಸಿಕವಾದ ಈ ಘಟನೆಯು  *ಬೈಬಲ್* ಎಂಬ ಪುಸ್ತಕದಲ್ಲಿ  ಉಲ್ಲೇಖವಾಗಿದೆ.

*ಬೈಬಲ್ ಒಂದು ಧಾರ್ಮಿಕ ಪುಸ್ತಕವಲ್ಲ ....*

ಬದಲಾಗಿ ಇದು ಪ್ರಪಂಚದ ಸಮಸ್ತ ಸೃಷ್ಟಿ ಹಾಗೂ  ಮನುಕುಲದ ಇತಿಹಾಸವನ್ನು ತಿಳಿಸುವ ಚಾರಿತ್ರಿಕ ಪುಸ್ತಕವೂ, ಮನುಷ್ಯನಿಗೆ ಮಾರ್ಗದರ್ಶನದ ಕೈಪಿಡಿಯೂ ಆಗಿದೆ.


ಆದ್ದರಿಂದ.....
ಈ ಯೇಸುವಿನ ಜನನ, ಮರಣ ಹಾಗೂ ಪುರುತ್ಥಾನವು ಪುರಾಣವೋ , ಕಟ್ಟುಕತೆಯೋ ಅಲ್ಲ,......!
ಇದು ಆಧಾರ ಸಹಿತವಾದ ಚರಿತ್ರೆ....!

ನಾವು ಕ್ಷಮಿಸಲ್ಪಡಲು ಯೇಸು ದಂಡಿಸಲ್ಪಟ್ಟನು.
ನಾವು ಜೀವವನ್ನು ಹೊಂದಲು ಯೇಸು ಮರಣವನ್ನು ಹೊಂದಿದನು.

ಮನುಕುಲದ ಮುಕ್ತಿಗಾಗಿ ಯೇಸು ತನ್ನ ಪ್ರಾಣವನ್ನು ನೀಡಿದ ಈ ಮಹಾದಿನವು ಮನುಕುಲಕ್ಕೆ ಶುಭವಾಯಿತು.


ಇಂತಿ,
Rr. ಆದೀಶಸಾಗರ್ ಎಂ. ಡಿ.
ಎಷ್ಕೋಲ್ ಎಸ್ಟೇಟ್ಸ್ & ಪ್ರಾಪರ್ಟೀಸ್
ಮೈಸೂರು.
  • Blogger Comments
  • Facebook Comments

0 comments:

Post a Comment

Item Reviewed: ಏನಿದು ಗುಡ್ ಫ್ರೈಡೆ...? Rating: 5 Reviewed By: Coffee With Farhan
Scroll to Top