Sunday, 9 April 2017

ಮರೆವು ಮನುಷ್ಯನಿಗೆ ದೇವರು ಕೊಟ್ಟಿರುವ ವರವು ಹೌದು

ಮರೆವು ಮನುಷ್ಯನಿಗೆ ದೇವರು ಕೊಟ್ಟಿರುವ ವರವು ಹೌದು ಶಾಪವು ಹೌದು .ನಾವು ಏನ್ನನ್ನು ಮರೆಯುತ್ತೇವೆ , ಯಾವುದನ್ನು ನೆನಪಿಡುತ್ತೇವೆ  ಎಂಬುದು ನಮ್ಮ ಜೀವನಕ್ಕೆ ,ಬುದ್ಧಿಗೆ ,ಮನ್ನಸ್ಸಿಗೆ ಎಷ್ಟು ಮುಖ್ಯ ಎಂಬುದರ ಮೇಲೆ ಅವಲಂಬಿತವಾಗಿರುತ್ತವೆ.
 
ನಾವು ಸಾಮಾನ್ಯವಾಗಿ ಏನ್ನನು ಮರೆಯುತ್ತೇವೆ ? ನಮ್ಮ ಆಪ್ತರ ಜನ್ಮದಿನಗಳು ,ಮದುವೆ ವಾಷಿಕೋತ್ಸವಗಳು,ಯಾರನ್ನಾದರೂ ಭೇಟಿಯಾಗಿ ಪರಿಚಯ ಮಾಡಿಕೊಂಡಿದ್ದರೂ ಅವರ ಹೆಸರು ,ಉದ್ಯೋಗ ಇವೆ ಮುಂತಾದ ವಿವರಗಳನ್ನೆಲಾ ಮರೆತಿರುತ್ತೇವೆ.ವರ್ಷಕ್ಕೊಮ್ಮೆ ಬರುವ ದಿನವನ್ನು ವರ್ಷಪೂರ್ತಿ ನೆನಪಿಡುವುದು ,ಅಪರೂಪಕ್ಕೆ ಎಂದೋ ಭೇಟಿಯಾದವರ ಸಂಪೂರ್ಣ ವಿವರಗಳ್ಳನ್ನು ಮರೆಯದಿರುವುದು ಯಾರಿಗಾದರೂ ಕಷ್ಟದ ಕೆಲಸವೇ.ನಾವು ಮರೆಯಲೇಬಾರದು ಎಂದು ಪಣ ತೊಟ್ಟಂತೆ ಪದೇ ಪದೇ ನಮಗೆ ನಾವೇ ನೆನಪಿಸಿಕೊಳ್ಳುವ ಕೆಲವು ಸಂಗತಿಗಳು ಕರ್ಣನಿಗೆ ಯುದ್ಧದ ಸಮಯದಲ್ಲಿ ಮಂತ್ರಗಳು ಮರೆತುಹೋದಂತೆ ಪ್ರಮುಖ ಸಂಧರ್ಭಗಳ್ಳಲ್ಲಿ ಮರೆತು ಹೋಗಿ 'ಮರೆಗುಳಿ' ಎಂದು ಅನ್ನಿಸಿಕ್ಕೊಳ್ಳುತೇವೆ.

ಆದರೆ ಕೆಲವೊಮ್ಮೆ ಮರೆಯಲೇಬೇಕು ಎಂದು ಅಂದುಕೊಳ್ಳುವ ಕೆಲವು ವಿಷಯಗಳು ಪದೇ ಪದೇ ನೆನಪಾಗಿ ಮನಸ್ಸನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತವೆ .ನಾವು ಸಾಮಾನ್ಯವಾಗಿ ಯಾವುದ್ದನು ಮರೆಯುವುದಿಲ್ಲ ? ನಮಗೆ ಚಿಕ್ಕ ವಯಸ್ಸಿನಲ್ಲಿ ಯಾರಾದರೂ ಬೈದ್ದಿದರೆ ,ಆ ಮಾತು ಮರ್ಮಕ್ಕೆ ತಾಗುವಂತಿದ್ದರೆ ಸಾಯುವವರೆಗೂ ಆ ಮಾತು ಕೇಳಿದ ಕಿವಿಯಲ್ಲಿ ಹಾಗೆ ಕೂತಿರುತ್ತದೆ.ಮನುಷ್ಯ ತನ್ನ ಸಂತೋಷದ ಕ್ಶಣಗಳ್ಳನ್ನು ,ನಕ್ಕು ನಲ್ಲಿದ ಘಳಿಗೆಗಳ್ಳನ್ನು ತುಂಬಾ ಕಾಲ ನೆನಪಿಡುವುದಿಲ್ಲ ,ಆದರೆ ತನಗಾದ ಅವಮಾನ ,ಹತಾಶೆ ,ನೋವು ,ಸಂಕಟಗಳ ನೆನಪು ಅವನ ಸ್ಮೃತಿಪಟಲದಲ್ಲಿ ಶಾಶ್ವತವಾಗಿ ಕೂತಿರುತ್ತದೆ.
 
ಮನುಷ್ಯನಿಗೆ ಮೊದಲ ಪ್ರೀತಿಯನ್ನು ಮರೆಯುವುದು ಕಷ್ಟ ಎಂಬ ಮಾತಿದೆ.ನಾವು ಪ್ರಾಣಕಿಂತ ಹೆಚ್ಚಾಗಿ ಪ್ರೀತಿಸುವವರು ದೂರವಾದರೆ ಅವರನ್ನು ಮರೆಯಲಾಗದೆ ಮಂಕಾಗಿಬಿಡುತ್ತೆವೆ.ಬಹಳ ಕಾಲ ಜೊತೆಯಿದ್ದವರು ಅನಿವಾರ್ಯ ಕಾರಣಗಳಿಂದ ಬೇರೆ ಊರುಗಳಿಗೆ ಹೋಗಬೇಕಾಗಿ ಬಂದಾಗ ,ನಮ್ಮ ಬಂಧುಗಳೋ ,ಸ್ನೇಹಿತರೋ ವಿಧಿವಶರಾದಾಗ ,ಪ್ರೀತಿ ಮುರಿದು ಬಿದ್ದಾಗ  ಇಂತಹ ಇನ್ನು ಹಲವು ಕಾರಣಗಳಿಗೆ ನಾನು ಮತೊಬ್ಬರ ನನಪಿನಿಂದ ಬಳಲುತ್ತೆವೆ.

ಇಂತಹ ಸಂದರ್ಭಗಳಲ್ಲಿ ಇದರಿಂದ ಹೊರಬರಬೇಕಾರೆ ಇರುವ ದಾರಿ ಎಂದರೆ ನಾವು ನಮ್ಮ ಕೆಲಸದಲ್ಲಿ ,ವೃತಿ ಬದುಕಿನಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವುದು .ವೃತಿಬದುಕು ಯಾವುದನ್ನು ಕೇಳುವುದಿಲ್ಲ .ಈ ಕೆಲಸ ಆಗಬೇಕು ಎಂದರೆ ನಿರ್ದಿಷ್ಟ ಸಮಯದಲ್ಲಿ ಅದು ಆಗಬೇಕು ಅಷ್ಟೆ .ಅದಕೆ ನಿಮ್ಮ ಸುಖ, ದುಃಖ,ನೋವು ,ನಲಿವು ಯಾವುದು ಬೇಕಿಲ್ಲ .ನಿಮ್ಮ ಕೆಲಸದಲ್ಲಿ ನೀವು ಆ ಪರಿ ತೊಡಗಿಸಿಕೊಂಡರೆ ನೀವು ಯಾರನ್ನು ಮಿಸ್ ಮಾಡುವುದಿಲ್ಲ ಯಾಕೆಂದರೆ ನಿಮಗೆ ಯಾರು ನೆನಪೇ ಆಗುವುದಿಲ್ಲ .ನಿಮಗೆ  ಮಾಡುವ ಕೆಲಸದಲ್ಲಿ ಸಂತೃಪ್ತಿ ಇದ್ದರೆ ನೀವು ಆ ರೀತಿ ತೊಡಗಿಸಿಕೊಳ್ಳಬಹುದು ಇಲ್ಲ ಎಂದರೆ ನೆನಪುಗಳು ನಿಮ್ಮನು ಬಿಡುವುದಿಲ್ಲ ,ಕೆಲಸದ ತೃಪ್ತಿಯು ಸಿಗುವುದಿಲ್ಲ.

ಈ ಬ್ಲಾಗ್ ಬರೆದವರು - ಭರತ್ ಜಿ - ಕ.com ಫ್ರೀಲಾನ್ಸ ಬ್ಲಾಗರ್ - ಮೈಸೂರು  
  • Blogger Comments
  • Facebook Comments

0 comments:

Post a Comment

Item Reviewed: ಮರೆವು ಮನುಷ್ಯನಿಗೆ ದೇವರು ಕೊಟ್ಟಿರುವ ವರವು ಹೌದು Rating: 5 Reviewed By: Coffee With Farhan
Scroll to Top